ನಮಸ್ಕಾರ ಮತ್ತು ಹಾರ್ದಿಕ ಸ್ವಾಗತ! 🙏
ಕನ್ನಡಕಾವ್ಯದ ಭವ್ಯ ಲೋಕವನ್ನು ಆಸ್ವಾದಿಸಲು, ಚರ್ಚಿಸಲು ಮತ್ತು ಆಚರಿಸಲು ರೂಪಿಸಲಾಗಿರುವ ನಮ್ಮದೇ ಆದ ಪುಟ್ಟ 'ಕಾವ್ಯ ಅಡ್ಡ'ಕ್ಕೆ (r/KannadaKavya) ನಿಮಗೆ ಪ್ರೀತಿಯ ಸ್ವಾಗತ.
A warm welcome to r/KannadaKavya—your dedicated space to explore, discuss, and celebrate the rich world of Kannada poetry!
ಹಳೆಗನ್ನಡದ ಪ್ರೌಢತೆಯಿಂದ ಹಿಡಿದು ವಚನ, ಕೀರ್ತನೆಗಳು, ದಾಸಪದಗಳ ತತ್ವಗಳವರೆಗೆ; ನವೋದಯ, ನವ್ಯ, ಬಂಡಾಯ ಕಾವ್ಯಗಳ ಕ್ರಾಂತಿಕಾರಿ ಹಾಗೂ ಭಾವನಾತ್ಮಕ ಸಾಲುಗಳಿಂದ ಹಿಡಿದು ಇಂದಿನ ತಲೆಮಾರಿನ ಕವನಗಳವರೆಗೆ ಪ್ರತಿಯೊಂದಕ್ಕೂ ಇಲ್ಲಿ ಜಾಗವಿದೆ.
📌 ನಾವಿಲ್ಲಿ ಮಾಡುವುದೇನು (What do we do here) :
ಕಾವ್ಯ ಚರ್ಚೆ ಮತ್ತು ಅರ್ಥ ವಿವರಣೆ (Discuss & Analyze): ನಿಮಗೆ ಇಷ್ಟವಾದ ಪ್ರಸಿದ್ಧ ಕವಿಗಳ ಕವಿತೆಗಳನ್ನು ಹಂಚಿಕೊಳ್ಳಿ. ಆ ಸಾಲುಗಳ ಹಿಂದಿರುವ ಭಾವನೆ, ರೂಪಕಗಳು ಅಥವಾ ಕಠಿಣ ಪದಗಳ ಅರ್ಥವನ್ನು ಚರ್ಚಿಸೋಣ.
ಭಾವಗೀತೆ ಮತ್ತು ಚಲನಚಿತ್ರ ಗೀತೆಗಳು (Bhavageethe & Film Lyrics): ಸಿ. ಅಶ್ವತ್ಥ್, ಮೈಸೂರು ಅನಂತಸ್ವಾಮಿ ಅವರ ಧ್ವನಿಯಲ್ಲಿ ಮೂಡಿಬಂದ ಅಮರ ಗೀತೆಗಳಂತಹ ಮೂಲ ಕಾವ್ಯರೂಪ ಹಾಗೂ ಚಿತ್ರಗೀತೆಗಳ ಸಾಹಿತ್ಯದ ಸೊಬಗನ್ನು ಇಲ್ಲಿ ಮೆಲಕು ಹಾಕೋಣ.
ಸ್ವರಚಿತ ಕವನಗಳು (Your Original Poetry): ನಿಮ್ಮಲ್ಲಿರುವ ಕವಿಯನ್ನು ಹೊರಹಾಕಿ! ನೀವು ಬರೆದ ಸ್ವಂತ ಕವನಗಳನ್ನು (Swarachita) ಧೈರ್ಯವಾಗಿ ಹಂಚಿಕೊಳ್ಳಿ. ಬೆಂಬಲ ಮತ್ತು ಸೃಜನಾತ್ಮಕ ಸಲಹೆಗಳು ಸದಾ ಇಲ್ಲಿರುತ್ತವೆ.❣️
ಸಂದೇಹ ಮತ್ತು ಕಲಿಕೆ (Learn & Ask): ಹಳೆಗನ್ನಡದ ಪದಗಳಾಗಲಿ ಅಥವಾ ಕಾವ್ಯದ ಯಾವುದೇ ಪ್ರಕಾರದ ಬಗ್ಗೆ ಸಂದೇಹಗಳಿದ್ದರೆ ಮುಕ್ತವಾಗಿ ಕೇಳಿ, ಪರಸ್ಪರ ಕಲಿಯೋಣ 🫶🏻
📝 ಒಂದು ಸಣ್ಣ ಗಮನಿಕೆ (A Quick Note):
ಲಿಪಿ ಮತ್ತು ಭಾಷೆ (Script & Language): ಕನ್ನಡ ಲಿಪಿಯಲ್ಲಿ ಬರೆಯುವವರಿಗೆ ಸದಾ ಆದ್ಯತೆ. ಆದರೆ ಇಂಗ್ಲಿಷ್‌ನಲ್ಲಿ ಕನ್ನಡವನ್ನು ಬರೆಯುವ (Kanglish) ಸ್ನೇಹಿತರಿಗೂ ಇಲ್ಲಿ ಮುಕ್ತ ಅವಕಾಶವಿದೆ. ಎಲ್ಲರಿಗೂ ಸುಲಭವಾಗಲು, ಕಠಿಣ ಕವನಗಳಿಗೆ ಚಿಕ್ಕದಾದ ವಿವರಣೆ ಅಥವಾ ಇಂಗ್ಲಿಷ್ ಸಾರಾಂಶವನ್ನು (Gist) ಕಮೆಂಟ್‌ನಲ್ಲಿ ಹಂಚಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ.
🤝ಗೌರವಯುತ ಚರ್ಚೆ (Respect and Constructive Critique): ಕವಿತೆಗಳ ಮೇಲಿನ ಚರ್ಚೆ ಸದಾ ಸೌಹಾರ್ದಯುತವಾಗಿರಲಿ. ಬೇರೆಯವರ ಭಾವನೆಗಳಿಗೆ ಹಾಗೂ ಅವರ ಸ್ವಂತ ಬರಹಗಳಿಗೆ (Swarachita) ಪ್ರೋತ್ಸಾಹ ನೀಡಿ, ಗೌರವಿಸಿ.
💬 ಸಣ್ಣ ಪರಿಚಯ ಮಾಡಿಕೊಡಿ:
ನಿಮ್ಮ ನೆಚ್ಚಿನ ಕನ್ನಡ ಕವಿ (ಅಥವಾ ಗೀತಕಾರರು) ಯಾರು?
ನಿಮ್ಮ ಮನಸ್ಸಿಗೆ ಅತ್ಯಂತ ಹತ್ತಿರವಾದ ಯಾವುದಾದರೂ ಒಂದು ಕಾವ್ಯದ ಸಾಲನ್ನು ಇಲ್ಲಿ ಹಂಚಿಕೊಳ್ಳಿ!
ಬನ್ನಿ, ಕನ್ನಡ ಕಾವ್ಯದ ಕಂಪನ್ನು ಒಟ್ಟಾಗಿ ಪಸರಿಸೋಣ! ✍️✨💛❤️