r/karnataka • u/Embarrassed_Roof_544 • 8h ago
Is this issue so serious that Premada Oorali touching this issue filled B and C centres in Taluk and Villages made it gross 150 crores?
ಪ್ರೇಮದ ಊರಲಿ ಚಿತ್ರ ಗೆದ್ದಿರೋದಕ್ಕೆ ಖುಷಿ ಇದೆ. ನಮ್ಮ ನಿರ್ಮಾಪಕ/ನಿರ್ದೇಶಕ ಗೆದ್ದರೆ ಯಾರಿಗೆ ಇಷ್ಟ ಆಗೊಲ್ಲ. Technically ಈ ಸಿನೆಮಾದಲ್ಲಿ ಅಂತಹದ್ದು ಏನು ಇಲ್ಲ. ಅವರು ಆಯ್ಕೆ ಮಾಡಿರೋ ಜಾಗ ಅವರಿಗೆ ಅಷ್ಟು ಒಳ್ಳೆ visuals ಕೊಡ್ತಿದೆ.
ಈ ಸಿನಿಮಾ ಗೆಲ್ಲಲು ಕಾರಣ
\- ರಂಗಾಯಣ ರಘು ಅವರ ನಟನೆ.
\- ವಸಂತ ಅನ್ನೋ ಕ್ಯಾರೆಕ್ಟರ್
\- ಸೀಗೆಗುಡ್ಡ ಶಿವ ದೇವಾಲಯ
\- bgm ಹಾಗೂ ಹಾಡುಗಳು
ಈ ಎಲ್ಲದಕ್ಕೂ ಮೀರಿದ ಕಾರಣ ಹಳ್ಳಿ ಅಲ್ಲಿ ಇರೋ ಯುವಕರ ಸಮಸ್ಯೆ. ಪ್ರತಿ ವರ್ಷ ಈ ಬಗ್ಗೆ news ಬರ್ತಾನೆ ಇರುತ್ತೆ. BBC ಕೂಡ ಇದನ್ನ ತೋರಿಸಿದೆ. ಅದು ಕೂಡ especially ನಮ್ಮ ಕರ್ನಾಟಕದ ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೋಗ್ತಾರಂತೆ. ಈ ವಿಷಯವೇ ಒಂದು ದೊಡ್ಡ ಕಾರಣ ಈ ಸಿನಿಮಾ ಗೆದ್ದಿರೋದಕ್ಕೆ. ಈ ಚಿತ್ರದ ಗೆಲುವು ಆ ಯುವಕರ ಸಮಸ್ಯೆಗೆ ಹಿಡಿದ ಕೈಗನ್ನಡಿ ಆಗಿದೆ.
ಸಿಟಿ ಜೀವನದಲ್ಲಿ ಬೆಳೆದಿರೋ ಯುವಕರಿಗೆ ಇಲ್ಲಿನ scene ಗಳು, ಮಾತುಗಳು, ಆ ಕ್ಯಾರೆಕ್ಟರ್ಗಳು ಯೋಚನೆ ಮಾಡೋ ರೀತಿ ಮುಂತಾದ ವಿಷಯ ಬಹಳ regressive ಅನ್ಸತ್ತೆ. ಆದರೆ ಹಳ್ಳಿ ಜೀವನದಲ್ಲಿ ಇದು ಬಹಳ ಸಾಮಾನ್ಯ. ಸಣ್ಣ ಊರುಗಳು ಪ್ರತಿ ಮನೆ ಅಲ್ಲಿರೋ ಜನಗಳ ಬಗ್ಗೆ ಒಬ್ಬರಿಗೆ ಒಬ್ರು ಮಾತಾಡ್ಕೊಂಡು ಕಿವಿ ಓದ್ತಾರೆ.
ಉದಾ: ನನ್ನ ಸ್ವಂತ ಅನುಭವ, ನಮ್ಮಲ್ಲೇ ಒಬ್ಬ ಹೆಣ್ಣು ಸಿಟಿಯಿಂದ ಹಳ್ಳಿಗೆ ಮದುವೆ ಆಗಿ ಹೋದಮೇಲೆ ಬಹಳ ವರ್ಷ ಕಷ್ಟ ಪಟ್ಟರು. ಹೆಣ್ಣಿನ ಋತುಚಕ್ರದ ಮಾಸಿಕ ದಿನ ಮನೆ ಹೊರಗೆ ಇರಬೇಕು ಅನ್ನೋ ಆಚರಣೆ ಇತ್ತಂತೆ. ಅವರು ಪ್ರಶ್ನೆ ಮಾಡಿ ಕೇಳಿದಕ್ಕೆ ಅವರ ಮನೆ ಬಿಟ್ಟು, ಅಕ್ಕ ಪಕ್ಕದ ಮನೆ ಸೇರಿ ಅರ್ಧ ಊರೇ ಮನೆಗೆ ಬಂದು ಪಂಚಾಯತಿಗೆ ನಿಂತಿತ್ತಂತೆ. ಹಾಗೋ ಹೀಗೋ ಎಲ್ಲಾ ಸರಿ ಹೋಗಿ ಆ ಮನೇಲಿ ಆ ಪದ್ದತಿ ನಿಲ್ಸಿದ್ರಂತೆ. ಆದರೆ ಊರಿಗೆ ಊರೇ ಮಾತಾಡೋ ಥರ ಆಯ್ತಂತೆ. ಅದೇ ರೀತಿ ಈ ಸಿನಿಮಾದಲ್ಲೂ ಸಿಟಿಯಿಂದ ಬರೋ ಹೀರೋಯಿನ್ ಬಗ್ಗೆ ಊಹಾ ಪೋಹ ಅಷ್ಟು ದೊಡ್ಡ ವಿಷಯ ಆಗುತ್ತೆ.
ಹಳ್ಳಿ ರೈತರಿಗೆ ಹೆಣ್ಣು ಕೊಡ್ತಿಲ್ಲ ಅನ್ನೋಕೆ ತುಂಬಾ ಕಾರಣಗಳು ಇವೆ. ಅದು ನೀವೇ ಹುಡ್ಕೋಳಿ. ಆದರೆ ಈ ಎಲ್ಲಾ ವಿಚಾರ relatable ಅನ್ನಿಸ್ತು ಹಳ್ಳಿ ಜನಕ್ಕೆ. Relatability is the major biggest factor for the success of this movie?
ಆದರೆ ನಿಮಗೆಲ್ಲ ಒಂದು ಪ್ರಶ್ನೆ. KFI is famous for repeating the success formula for atleast 6-8 years. ನಿಜವಾಗ್ಲೂ ಇಂಥ ಸಿನಿಮಾ ಮತ್ತೆ ಮತ್ತೆ ಬರಬೇಕಾ? ನನಗನಿಸಿದ್ದು ಬರ್ಬೇಕು. ಹಳ್ಳಿ ತಾಲೂಕುಗಳಲ್ಲಿ ಇರೋ social issues ಬಗ್ಗೆ ಸಿನೆಮಾ ಬರ್ಬೇಕು. ಆದರೆ ಸ್ವಲ್ಪ ಪ್ರಬುದ್ಧ ರೀತಿಯಲ್ಲಿ ಕಥೆ ಹೇಳ್ಬೇಕು. ಸಿಟಿ ಹಾಗೂ ಹಳ್ಳಿ ಯಾರೇ ನೋಡಿದ್ರು ಆ ಸಮಸ್ಯೆಗೆ ಬೇಗ solution ಸಿಗ್ಲಪ್ಪ ಅನ್ನೊ ಥರ ಇರಬೇಕು. ಸಿಟಿ ಅವರು ನೋಡಿದ್ರೆ ಆ ಸಮಸ್ಯೆ ಬಗ್ಗೆ ಇನ್ನೂ research ಮಾಡಬೇಕು ಅನ್ನಿಸಬೇಕು. ಹಳ್ಳಿ ಅವರು ನೋಡಿದ್ರೆ ಸಮಸ್ಯೆ ಕಮ್ಮಿ ಆಗಲು ಅವರು ತಮ್ಮ ಕೆಟ್ಟ ಆಚರಣೆಗಳಿಂದ ದೂರ ಇರಬೇಕು ಅನ್ನೋ ಮೆಸೇಜ್ ಕೊಡಬೇಕು. (Eg: ಇಲ್ಲಿ ಮಾವ ಓದಿಲ್ಲ ಅಂದರು ಮಾವ ಒಳ್ಳೆ ಗುಣ ಇರೋ ವಸಂತನ ಒಪ್ಪದೇ ಇರೋದು. ಸಿಟಿಯಿಂದ ಮದ್ವೆ ಆಗಿ ಬಂದರು ಹೀರೋ ಯಾವುದೋ challenge ಗಾಗಿ ನಡತೆಗೆಟ್ಟ friend ಹೇಳಿದ anta ಅವಳನ್ನು ತಿರಸ್ಕಾರ ಮಾಡೋದು. ಯಾಕ್ ಸ್ವಾಮಿ ಮದ್ವೆ ಆಗಿ ಬರ್ತಾರೆ ಈ mentality idre?)
ಇಷ್ಟು ಈ ಸಮಸ್ಯೆ relate ಆಗುತ್ತೆ ಅಂದರೆ ಸಿನಿಮಾ ಟೀಮ್ ಅವರು ಕಡೆಯಲ್ಲಿ ಒಂದು ಮೆಸೇಜ್ ಕೂಡ ಕೊಡಬಹುದಿತ್ತು!
